Photo Gallery
News 22-10-2024
- ಕನ್ನಡಪ್ರಭ ಮುರುಕುಂಬಿಯ ಅಸ್ಪೃಶ್ಯತೆ ಪ್ರಕರಣ: 101 ಮಂದಿ ವಿರುದ್ಧ ಆರೋಪ ಸಾಬೀತು ಕೊಪ್ಪಳ ಜಿಲ್ಲಾ, ಸತ್ರ ನ್ಯಾಯಾಲಯದ ಮಹತ್ವದ ತೀರ್ಪು, 24ರಂದು ಶಿಕ್ಷೆ ಪ್ರಕಟ
ಕಿನ್ನಾಳ ಗ್ರಾಮವು ವ್ಯಾಜ್ಯ ಮುಕ್ತ ಗ್ರಾಮ ಮಾಡುವ ಬಗ್ಗೆ ಸುದ್ದಿ
ಸಾಹೇಬರು ಹೇಳಿ ಕೇಳಿ ಸರಳ ಸಜ್ಜನರು ವ್ಯಕ್ತಿತ್ವದವರು ಸದಾ ಬಡವರ ಬಗ್ಗೆ ಹಾಗೂ ನ್ಯಾಯದ ಪರ ಮಿಡಿಯುವರು ಶಿಕ್ಷಣದ ಬಗ್ಗೆ ಬಹಳ ಮಹತ್ವ ನೀಡುತ್ತಾರೆ. ಈಗ ಸಾಹೇಬರು ಕಿನ್ನಾಳ ಗ್ರಾಮವು ವ್ಯಾಜ್ಯ ಮುಕ್ತ ಗ್ರಾಮ ಮಾಡೆ ತೋರಿಸುತ್ತಾರೆ . ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳುತ್ತಾರೆ ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಹಾಗೆ ಗೌರವಾನ್ವಿತರು ತಮ್ಮ ಗುರಿ ಮುಟ್ಟುವವರೆಗೂ ಬಿಡುವುದಿಲ್ಲ ಕಿನ್ನಾಳ ಗ್ರಾಮದಲ್ಲಿ ಕುಂದು ಕೊರತೆ ಬಗ್ಗೆ ಆಲೋಚಿಸಿದ್ದಾರೆ. ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಪರಿಸಿಲಿಸಿದರು ಶಾಲೆಗಳು ಅಲ್ಲಿನ ರಸ್ತೆಗಳು ವಿಕ್ಷಿಸಿದರು
ಅಂಗನವಾಡಿ ಕೇಂದ್ರಗಳಿಗೆ ನ್ಯಾಯಾಧೀಶರ ಅನೀರೀಕ್ಷಿತ ಭೇಟಿ
ಕೊಪ್ಪಳ, ಜು.22 (ಕರ್ನಾಟಕ ವಾರ್ತೆ): ಗೌರವಾನ್ವಿತ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರರಾದ ಚಂದ್ರಶೇಖರ ಸಿ. ಅವರು ಜುಲೈ 22ರಂದು ಕೊಪ್ಪಳ ನಗರದ ಗದಗ ರಸ್ತೆಯ ಹತ್ತಿರವಿರುವ ಗಾಂಧೀನಗರದಲ್ಲಿ ಅಕ್ಕ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರ-1 (ಸಂಖ್ಯೆ. 295600031606) ಹಾಗೂ ಅಂಗನವಾಡಿ ಕೇಂದ್ರ-2ಗಳಿಗೆ ಅನೀರೀಕ್ಷಿತವಾಗಿ ಭೇಟಿ ನೀಡಿದರು. ನ್ಯಾಯಾಧೀಶರ ಭೇಟಿ ಸಮಯದಲ್ಲಿ ಅಂಗನವಾಡಿಗಳಲ್ಲಿ ಕೆಲವು ನ್ಯೂನ್ಯತೆಗಳು ಕಂಡುಬಂದಿದ್ದು, ಎರಡೂ ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಸಿಬ್ಬಂದಿಗಳು ಹಾಜರಿರಲಿಲ್ಲ. ಅಂಗನವಾಡಿ ಕೇಂದ್ರ-2ರಲ್ಲಿ ಸಿಬ್ಬಂದಿಗಳ ಪರವಾಗಿ ಅಂಗನವಾಡಿ ಸಹಾಯಕ ಕರ್ಮಚಾರಿಯ ಮಗಳನ್ನು ಕೂಡಿಸಿದ್ದರು. ಎರಡೂ ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಮಕ್ಕಳು ಹಾಜರಿರಲಿಲ್ಲ. ಎರಡೂ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳದೇ ಇರುವುದು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಕಂಡುಬಂದಿರುವುದಲ್ಲದೇ ದಿನ ಬಳಕೆ ಹಾಗೂ ಶೌಚಾಲಯಕ್ಕೂ ನೀರಿನ ಸರಬರಾಜು ಸಹ ಇರುವುದಿಲ್ಲ. ಅಲ್ಲದೆ ಒಳ ಚರಂಡಿಯ ತ್ಯಾಜ್ಯವು ಅಂಗವವಾಡಿಗಳ ಆವರಣದಲ್ಲಿ ಹರಡಿರುತ್ತದೆ. ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ಮಾಡಿದ ಯಾವುದೇ ಕುರುಹುಗಳು ಸಹ ಇರುವುದಿಲ್ಲ. ಈ ದಿನವೂ ಸಹ ಅಡುಗೆ ಮಾಡಿರುವುದಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಪುಸ್ತಕದಲ್ಲಿ ಜುಲೈ 20 ಮತ್ತು ಜು.22ರ ಮಕ್ಕಳ ಹಾಜರಿಯನ್ನು ನಮೂದಿಸಿರುವುದಿಲ್ಲ ಹಾಗೂ ಅಂಗನವಾಡಿ ಸಿಬ್ಬಂದಿಗಳ ಸಹಿಗಳು ಸಹ ಇರುವುದಿಲ್ಲ. ನ್ಯಾಯಾಧೀಶರು ಭೇಟಿ ನೀಡಿದ ಕೆಲ ಸಮಯದ ನಂತರ ಒಬ್ಬ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕ ಸಿಬ್ಬಂದಿಯವರು ಬಂದು ಯಾವುದೇ ಸಮರ್ಪಕ ವಿವರಣೆಗಳನ್ನು ನೀಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ಕ್ರಮ ಜರುಗಿಸುವಂತೆ ಸೂಚಿಸಿದ ನ್ಯಾಯಾಧೀಶರು, ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.